ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದಿಂದ 1978ರಲ್ಲಿ ಜನತಾ ಪಕ್ಷದಿಂದ ಆರ್.ಆರ್.ಕಲ್ಲೂರ(ರೇವಣಸಿದ್ದಪ್ಪ ರಾಮಗೊಂಡಪ್ಪ ಕಲ್ಲೂರ) ಅವರು ಆಯ್ಕೆಯಾಗಿ ಪ್ರಪ್ರಥಮ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ನಂತರ ಕಾಂಗ್ರೆಸ್‌ನಿಂದ 1983 ಹಾಗೂ 1989ರಲ್ಲಿ ಪುನರಾಯ್ಕೆಯಾಗಿದ್ದರು. == ಪಂಪ್‌ಸೆಟ್ ಕಲ್ಲೂರ == ಆರ್.ಗುಂಡುರಾವರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ ವಿನಾಯ್ತಿ ಮಾಡಿದ್ದರಿಂದಾಗಿ ಜನರಿಂದ ಹಣ ಸಂಗ್ರಹಿಸಿ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ನ್ನು ಕಾಣಿಕೆ ನೀಡಿ ಸತ್ಕರಿಸಿದ್ದರು. ಈ ಕಾರಣಕ್ಕಾಗಿ ಇಂದಿಗೂ ಕಲ್ಲೂರ ಅವರಿಗೆ ಪಂಪ್‌ಸೆಟ್ ಕಲ್ಲೂರ ಎಂದೇ ಕರೆಯುತ್ತಾರೆ. == ಸಭಾಧ್ಯಕ್ಷರ ಕನ್ನಡ ಹೆಸರು == ಎಸ್.ಎಂ.ಕೃಷ್ಣ ವಿಧಾನ ಸಭಾಧ್ಯಕ್ಷ ಆಗಿದ್ದ ಸಂದರ್ಭದಲ್ಲಿ ಸಭಾಧ್ಯಕ್ಷ ಕಚೇರಿ ಬಲಬದಿಗೆ ಇಂಗ್ಲಿಷ್‌ನಲ್ಲಿ ಮಾತ್ರ ಅವರ ಹೆಸರು ಬರೆಯಲಾಗಿತ್ತು. ಕನ್ನಡದಲ್ಲೂ ಸಭಾಧ್ಯಕ್ಷರ ಹೆಸರು ಬರೆಯಬೇಕೆಂದು ಕಲ್ಲೂರ ಅವರು ಪ್ರತಿಭಟನೆ ಮಾಡಿದ್ದರು. ಅದರ ಫಲವಾಗಿ ಎಡಬದಿ ಗೋಡೆಯಲ್ಲಿ ಸಭಾಧ್ಯಕ್ಷರ ಹೆಸರು ಕನ್ನಡದಲ್ಲಿ ಇಂದಿಗೂ ರಾರಾಜಿಸುತ್ತಿದೆ. == ಜನ ಸೇವಕ == ಕಲ್ಲೂರರವರ ಸೇವೆ ಮತ್ತು ವ್ಯಕ್ತಿತ್ವ ಕುರಿತು ಅಭಿನಂದನಾ ಗ್ರಂಥ ಜನ ಸೇವಕ ಬಿಡುಗಡೆಯಾಗಿದೆ. == ಭೂಸೇನಾ ನಿಗಮದ ಅಧ್ಯಕ್ಷ == 1978ರಲ್ಲಿ ಜನತಾ ಪಕ್ಷದಿಂದ ಒಂದು ಬಾರಿ ಹಾಗೂ 1983 ಮತ್ತು 1989ರಲ್ಲಿ ಕಾಂಗ್ರೆಸ್ನಿಂದ ಎರಡು ಬಾರಿ ಶಾಸಕರಾದ ಆರ್.ಆರ್.ಕಲ್ಲೂರರವರು ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು. == ರಾಜಕೀಯ == 1978 ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1983, 1989ರಲ್ಲಿ ಆರ್.ಆರ್. ಕಲ್ಲೂರ ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು. ಕಾಂಗ್ರೆಸ್ನಿಂದ ೨ ಬಾರಿ ಶಾಸಕರಾದ ಆರ್.ಆರ್.ಕಲ್ಲೂರರವರು 1989ರಲ್ಲಿ ಭೂಸೇನಾ ನಿಗಮ(ಪ್ರಸ್ತುತ ಹೆಸರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ದ ಅಧ್ಯಕ್ಷರಾಗಿದ್ದರು. 1967 ಮತ್ತು 1972ರಲ್ಲಿ ಇಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. == ನಿಧನ == ಮಾಜಿ ಶಾಸಕ ಆರ್‌.ಆರ್‌.ಕಲ್ಲೂರ(91) ವಯೋಸಹಜ ಅನಾರೋಗ್ಯದಿಂದ ಗುರುವಾರ ದಿನಾಂಕ: ೧೫ನೇ ಮೇ ೨೦೨೧ರಂದು ನಿಧನರಾದರು. == ಉಲ್ಲೇಖಗಳು ==